ಅರಿಜೋನಾ-
	ಅಮೆರಿಕ ಸಂಯುಕ್ತಸಂಸ್ಥಾನಗಳ 48ನೆಯ ಪ್ರಾಂತ್ಯ. 31ಲಿ 20(37ಲಿ ಉ. ಅಕ್ಷಾಂಶ, 109ಲಿ 2- 114ಲಿ 45 ಪ. ರೇಖಾಂಶಗಳಿಂದ ಸೀಮಿತವಾಗಿದೆ. ಫೀನಿಕ್ಸ್ ರಾಜಧಾನಿ. ಟಸ್ಕಾನ್ ಮತ್ತು ಟೆಂಪೆ ಇತರ ಮುಖ್ಯ ನಗರಗಳು. ವಿಸ್ತೀರ್ಣ 1,13,909 ಚ.ಮೈ. ಅಪಾಚೀ ಇಂಡಿಯನ್ ಜನರ ನೆಲೆಯಾದ್ದರಿಂದ ಅಪ್ಯಾಚೀ ಪ್ರಾಂತ್ಯವೆಂದೂ ಪ್ರಪಂಚದ ಅತಿ ದೊಡ್ಡ ಹಿತ್ತಾಳೆ ಗಣಿಗಳನ್ನು ಹೊಂದಿರುವುದರಿಂದ ಹಿತ್ತಾಳೆ ಪ್ರಾಂತ್ಯವೆಂದೂ ಹೆಸರು ಪಡೆದಿದೆ. ಜನಸಂಖ್ಯೆ 13,02,161 (1960). 87% ಬಿಳಿಯರು, ಉಳಿದರವರು ನೀಗ್ರೋಗಳು, ಆದಿವಾಸಿ ಇಂಡಿಯನ್ನರು ಇತ್ಯಾದಿ. ವಿಸ್ತೀರ್ಣದಲ್ಲಿ ಸಂಯುಕ್ತ ಸಂಸ್ಥಾನಗಳಲ್ಲಿ 6ನೆಯ ಸ್ಥಾನ ಪಡೆದಿರುವ ಅರಿಜೆóೂೀನ ಜನಸಂಖ್ಯೆಯಲ್ಲಿ 35ನೆಯ ಸ್ಥಾನಕ್ಕೆ ಇಳಿಯುವುದು. ಖನಿಜಸಂಪತ್ತು ಹೇರಳ, ಆದರೆ ಕೈಗಾರಿಕೆಯ ಪ್ರಗತಿ ಸಾಲದು. ಜಗತ್ಪ್ರಸಿದ್ದ ಕೊಲರಾಡೊ ಮಹಾಕಮರಿ ಈ ಪ್ರಾಂತ್ಯದಲ್ಲಿದೆ.
(ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ